Current Date 29 Jul, 2026

ಕೆಂಗೇರಿ ಬಿಜಿಎಸ್ ಆಸ್ಪತ್ರೆಯಿಂದ ಸೆಷನ್ಸ್ ಕೋರ್ಟ್‌ಗೆ ನಟ ದರ್ಶನ್

ರೇಣುಕಾಸ್ವಾಮಿ ಪ್ರಕರಣದ ಆರೋಪಿ ದರ್ಶನ್ ಬಿಜಿಎಸ್ ಆಸ್ಪತ್ರೆಯಿಂದ ಕೋರ್ಟ್‌ಗೆ ತೆರಳಿದ್ದಾರೆ. ವೈದ್ಯರ ಅನುಮತಿ ಪಡೆದು ದರ್ಶನ್ ಜಾಮೀನು ಶ್ಯೂರಿಟಿ ಬಾಂಡ್‌ಗೆ ಸಹಿ ಹಾಕಲು ತೆರಳಿದ್ದಾರೆ. ಮನೆಗೆ ಮರಳಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ದರ್ಶನ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಹೈಕೋರ್ಟ್‌ನಿಂದ ರೆಗ್ಯುಲರ್ ಬೇಲ್ ಸಿಕ್ಕಿತ್ತು. ಹಾಗಾಗಿ ಇದೀಗ ಸೆಷನ್ಸ್ ಕೋರ್ಟ್ ಮುಂದೆ ಹಾಜಾರಾಗಿದ್ದಾರೆ.

ನಟ ದರ್ಶನ್‌ಗೆ ಒಂದೂವರೆ ತಿಂಗಳ ಹಿಂದೆ ಮಧ್ಯಂತರ ಜಾಮೀನು ಸಿಕ್ಕಿತ್ತು. ಬೆನ್ನು ನೋವಿನಿಂದ ಬಳಲುತ್ತಿರುವುದಾಗಿ ಹೇಳಿ ಸರ್ಜರಿ ಮಾಡಿಸಬೇಕು ಎನ್ನುವ ನೆಪವೊಡ್ಡಿ 6 ವಾರಗಳ ಮಧ್ಯಂತರ ಜಾಮೀನು ಪಡೆದಿದ್ದರು. ಆದರೆ 5 ವಾರ ಕಳೆದರೂ ಸರ್ಜರಿ ಮಾಡಿಸಿಕೊಂಡಿರಲಿಲ್ಲ. ಇದೇ ವಿಚಾರವನ್ನು ಎಸ್‌ಎಸ್‌ಪಿ ಪ್ರಸನ್ನ ಕುಮಾರ್ ಕೋರ್ಟ್ ಮುಂದೆ ಇಟ್ಟಿದ್ದರು.